ಸಂಜೀವಿನಿ ಟ್ರಸ್ಟ್ ತುರ್ತು ರೋಗಿಗಳಿಗೆ ಉತ್ತಮ ಆಸ್ಪತ್ರೆ, ವೈದ್ಯರನ್ನು ಹಾಗು ಆಸ್ಪತ್ರೆಗಳನ್ನು ಹುಡುಕುವಲ್ಲಿ ನೆರವಾಗುತ್ತದೆ, ಜ್ಞಾನಮಿತ್ರ ಸಂಜೀವಿನಿ ಟ್ರಸ್ಟ್ ನ ನಿರ್ದೇಶಕರು ಇವರು ಆಸ್ಪತ್ರೆಗಳ ಹೆಚ್ಚಿನ ಮಾಹಿತಿ ಹೊಂದಿದ್ದಾರೆ.
ಸಂಜೀವಿನಿ ಟ್ರಸ್ಟ್ ಹೋಲಿಗೆ ತರಬೇತಿಯು ಯುವತಿಯರಿಗೆ ಬಟ್ಟೆ ಹೊಲಿಯುವದನ್ನು ಕಲಿಸುತ್ತದೆ, ಪ್ರತಿ ತರಬೇತಿಯಲ್ಲಿ 10 ಜನ ವಿದ್ಯಾರ್ಥಿಗಳಿದ್ದು ಪ್ರತೀ ತರಬೇತಿ 6 ತಿಂಗಳಗಳವರೆಗೆ ನಡೆಯುತ್ತದೆ.
ವರ್ಷಕ್ಕೆ ಒಂದು ಬಾರಿ ಸಂಜೀವಿನಿ ಟ್ರಸ್ಟ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸುತ್ತದೆ ಇದರಲ್ಲಿ ಜನರು ಹೃದಯ, ರಕ್ತದ ಒತ್ತಡ, ಮಧುಮೇಹ, ಕಣ್ಣಿನ ತೊಂದರೆ ಹಾಗು ಹಲ್ಲಿನ ಪರಿಕ್ಷೆಯನ್ನು ಮಾಡಿಸಿಕೊಳ್ಳಬಹುದು.
ಸಂಜೀವಿನಿ ಟ್ರಸ್ಟ್ ಆರೋಗ್ಯ ಅರಿವು ಕಾರ್ಯಕ್ರಮವನ್ನು ಸಿರವಾರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಆಯೋಜಿಸುತ್ತಾಬಂದಿದೆ. ಇದರಲ್ಲಿ ಜನರು ಆರೋಗ್ಯಕರ ಜೀವನ ಹೇಗೆ ನಡೆಸುವುದೆಂದು ಕಲಿಯುತ್ತಾರೆ.
ಸಂಜೀವಿನಿ ಟ್ರಸ್ಟ್ ಬಡ, ವಯಸ್ಸಾದ ಹಾಗು ಅಂಗವಿಕಲರಿಗೆ ಸಹಾಯ ಮಾಡುತ್ತಾ ಅವರ ಜೀವನ ಕಟ್ಟಿಕೊಳ್ಳುವಲ್ಲಿ ಕೈಶಲ್ಯ ತರಬೇತಿ ನೀಡಿಸುವ ಮೂಲಕ ಹಾಗು ಸಣ್ಣ ಉದ್ಯಮವನ್ನು ಪ್ರರಂಬಿಸುವಲ್ಲಿ ಸಹಕಾರಿಯಾಗಿದೆ.