ಆರೋಗ್ಯ ಶಿಬಿರ
ವರ್ಷದಲ್ಲಿ ಒಮ್ಮೆ ಸಂಜೀವಿನಿ ಟ್ರಸ್ಟ್ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸುತ್ತದೆ. ಇದರಲ್ಲಿ ಜನರು ತಮ್ಮ ಹೃದಯ, ರಕ್ತದ ಒತ್ತಡ ಮಧುಮೇಹ ಕಣ್ಣಿನ ತೊಂದರೆ, ಹಲ್ಲಿನ ತೊಂದರೆ ಹಾಗೂ ದುಶ್ಚಟನಿವಾರಣೆಯ ಮಾರ್ಗದರ್ಶನವನ್ನು ಪಡೆಯಬಹುದಾಗಿದೆ.
ಕಳೆದ ಆರೋಗ್ಯ ಶಿಬಿರದಲ್ಲಿ 700 ಜನರು ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡರು. ತೊಂದರೆ ಕಂಡುಬಂದ ರೋಗಿಗಳನ್ನು ಆಸ್ಪತ್ರೆಯ ಚಿಕಿತ್ಸೆಗೆ ಕಳುಹಿಸಲಾಯಿತು. ಹಾಗೂ ಅತಿ ಬಡ ರೋಗಿಗಳಿಗೆ ಸಂಜೀವಿನಿ ಟ್ರಸ್ಟ್ ನಿಂದ ವೈದ್ಯಕೀಯ ನೆರವು ನೀಡಲಾಯಿತು.
ಆರೋಗ್ಯ ತಪಾಸಣೆ
ಈ ಶಿಬಿರದಲ್ಲಿ ಜನರು ತಮ್ಮ ಹೃದಯ ತೊಂದರೆ, ರಕ್ತದ ಒತ್ತಡ ಮಧುಮೇಹ, ಹಲ್ಲಿನ ತೊಂದರೆ ಹಾಗೂ ಕಣ್ಣಿನ ತೊಂದರೆಯನ್ನು ತಪಾಸಣೆ ಮಾಡಿಸಿಕೊಳ್ಳುತ್ತಾರೆ.
ಎಕೋಕಾರ್ಡಿಯೋಗ್ರಾಮ್.
ಹೃದಯ ತೊಂದರೆ ಇರುವ ಜನರು ಈ ಶಿಬಿರದಲ್ಲಿ ತಮ್ಮ ಹೃದಯವನ್ನು ಎಕೋಕಾರ್ಡಿಯೋಗ್ರಾಮ್ ಇದನ್ನು ಎಕೋ ಅಥವ ಡೈಯೋಗ್ನಾಸ್ಟಿಕ್ ಕಾರ್ಡಿಯಾಕ್ ಅಲ್ಟಾಸೌಂಡ್ ನಿಂದ ಪರೀಕ್ಷಿಸಿಕೊಳ್ಳ ಬಹುದು.
ಜನರು ತಮ್ಮ ರಕ್ತದ ಒತ್ತಡ ಹಾಗೂ ಮದುಮೇಹ ವನ್ನು ತಪಾಸಣೆ ಮಾಡಿಕೊಳ್ಳ ಬಹುದು. ಅತಿಯಾದ ರಕ್ತದೊತ್ತಡ ಹಾಗೂ ಮದುಮೇಹ ಇರುವ ರೋಗಿಗಳಿಗೆ ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ನೀಡಲಾಗುವುದು.
ರಕ್ತದ ಒತ್ತಡ ಹಾಗೂ ಮದುಮೇಹ
ಹಲ್ಲಿನ ತಪಾಸಣೆ
ಅದೇ ಶಿಬಿರದಲ್ಲಿ ಜನರು ತಮ್ಮ ಹಲ್ಲಿಗಳನ್ನು ತಪಾಸಣೆ ಮಾಡಿಸಿಕೊಳ್ಳ ಬಹುದು ಹಲ್ಲಿನ ತೊಂದರೆ ಇರುವ ರೊಗಿಗಳಿಗೆ ಸಲಹೆ ನೀಡಿ ಚಿಕಿತ್ಸೆ ನೀಡಲಾಗುವುದು.
ಇ.ಸಿ.ಜಿ. ಸ್ಕ್ಯಾನಿಂಗ್
ಕೆಲವು ರೋಗಿಗಳಿಗೆ ಎಲೆಕ್ಟ್ರಿಕ್ ಕಾರ್ಡಿಯೋಗ್ರಾಮ್ (ಇ.ಸಿ.ಜಿ). ಸ್ಕ್ಯಾನಿಂಗ್ ನ ಅವಶ್ಯಕತೆ ಇರುವತ್ತದೆ. ಅಂತಹ ರೋಗಿಗಳಿಗೆ ತಪಾಸಣೆ ಮಾಡಿ ಸಲಹೆಗಳನ್ನು ನಿಡುತ್ತಾರೆ ಹಾಗೂ ಚಿಕಿತ್ಸೆಗೆ ಕಳಿಸುತ್ತಾರೆ.
ಬಹಳ ರೋಗಿಗಳು ತಮ್ಮ ಕಣ್ಣುಗಳನ್ನು ಈ ಶಿಬಿರದಲ್ಲಿ ತಪಾಸಣೆ ಮಾಡಿಸಿಕೊಂಡರು ಕೆಲವು ರೋಗಿಗಳು ಚಿಕಿತ್ಸೆಯ ಸಲಹೆಯನ್ನು ಪಡೆದುಕೊಂಡರಉ ಹಾಗೂ ಕೆಲ ರೋಗಿಗಳು ಕನ್ನಡಕವನ್ನು ಪಡೆದರು.