ಆರೋಗ್ಯ ಅರಿವು ಕಾರ್ಯಕ್ರಮ
ಸಂಜೀವಿನಿ ಟ್ರಸ್ಟ್ ಆರೋಗ್ಯ ಅರಿವು ಕಾರ್ಯಕ್ರಮವನ್ನು ಸಿರವಾರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಯೋಜಿಸಿ ಜನರಿಗೆ ಉತ್ತಮ ಹಾಗೂ ಆರೋಗ್ಯಕರ ಜೀವನವನ್ನು ರೂಪಿಸುವದರ ಬಗ್ಗೆ ಅರಿವು ಮೂಡಿಸಿ ಸಾಮಾನ್ಯ ರೋಗಗಳಾದ ಹೃದಯ ರೋಗ ಸ್ಟ್ರೋಕ್, ಹಾಗೂ ಮಧುಮೇಹ ವನ್ನು ತಡೆಗಟ್ಟುವುದರ ಬಗ್ಗೆ ಅರಿವು ಮೂಡಿಸುತ್ತದೆ.
ಜ್ಞಾನಮಿತ್ರ ಜಟ್ಟೆಪ್ಪ, ಸಂಜೀವಿನಿ ಟ್ರಸ್ಟ್ ನ ಅಧ್ಯಕ್ಷರು ಈ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ, ಈ ಕಾರ್ಯಕ್ರಮದಲ್ಲಿ ಪ್ರೋಜೆಕ್ಟರ್ ವೀಡಿಯೋ ಮೂಲಕ ಆರೋಗ್ಯದ ತಜ್ಞರು ಅರಿವು ಮೂಡಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಉತ್ತಮ ಹಾಗೂ ಆರೋಗ್ಯಕರ ಜೀವನಕ್ಕೆ ವ್ಯಾಯಾಮ, ಪಥ್ಯಾನ್ನ, ಇಟ್ಟು ಹಾಗೂ ಉತ್ತಮ ತರಕಾರಿಗಳು, ಹಣ್ಣು ಹಾಗೂ ಕಾಳುಗಳ ಸೇವನೆಯ ಪಯೋಗದಜೊತೆಗೆ, ದೂಮಪಾನ ಹಾಗೂ ಮಧ್ಯಪಾನದ ದುರುಪಯೋಗಗಳನ್ನು ತಿಳಿಸುತ್ತಾರೆ, ಈ ಕಾರ್ಯಕ್ರಮದಲ್ಲಿ 100 ರಿಂದ 200 ಜನರು ಬಾಗವಹಿಸುತ್ತಾರೆ, ಬಹುತೇಕವಾಗಿ ಹಳ್ಳಿಗಳ ಮೇಲೆ ಆದಾರವಾಗಿರುತ್ತದೆ.
ಪ್ರತಿ ಆರೋಗ್ಯ ಅರಿವು ಕಾರ್ಯಕ್ರಮವು ಗೌರವಾನ್ಮಿತ ವ್ಯಕ್ತಿಗಳ ಹೆಸರಿನಲ್ಲಿ ಆಯೋಜಿಸಲಾಗುತ್ತದೆ. ನೀವು ನಿಮ್ಮ ಪ್ರೀತಿ ಪಾತ್ರರ ಹರಸರಿನಲ್ಲಿ ಆರೋಗ್ಯ ಅರಿವು ಕಾರ್ಯಕ್ರಮವನ್ನು ಅಯೋಜಿಸಬೇಕಿದ್ದಲ್ಲಿ ನಮ್ಮ ದೇಣಿಗೆ ಪುಟವನ್ನು ಬೇಡಿ ನೀಡಿ.
ಡಾ|| ಸುರೇಶ್ ವಿ.ಸಗರದ ರವರು ಹೃದಯ ಸಂಭಂದಿ ಕಾಯಿಲೆಗಳ ಬಗ್ಗೆ ಪ್ರೊಜೆಕ್ಟ್ ರ್ ಮೂಲಕ ತಿಳಿಸುತ್ತದ್ದಾರೆ, ಹೃದಯ ಕಾಯಿಲೆಗೆ ಕಾರಣ ಹಾಗೂ ಅವುಗಳನ್ನು ತಡೆಗಟ್ಟುವ ವಿದಾನದ ಜೊತೆಗೆ ಹೃದಯಾಘತ ವಾದಗ ಏನು ಮಾಡಬೇಕು ಎಂಬದುವುದರ ಬಗ್ಗೆ ಅರಿವು ಮೂಡಿಸುತ್ತಾರೆ.
100ಕ್ಕೂ ಹೆಚ್ಚು ಜನ ಹೃದಯ ರಕ್ಷಣೆ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.
ಕ್ಯಾನ್ಸ್ ರ್ ಅರಿವು ಕಾರ್ಯಕ್ರಮದಲ್ಲಿ ಜನರು ಕ್ಯಾನ್ಸ್ ರ್ ಗೆ ಕಾರಣ ಹಾಗೂ ಅದರಿಂದ ಗುಣಮುರಾಗುವದರ ಬಗ್ಗೆ ತಿಳಿಯುತ್ತಾರೆ. ಹಾಗೂ ದೂಮಪಾನ ಹಾಗೂ ಮಧ್ಯಪಾನದ ಪರಿಣಾಮಗಳನ್ನು ತಿಳಿಯುತ್ತಾರೆ.